ಇಂದು ಎನಗೆ ಗೋವಿಂದ

ಮಂತ್ರಾಲಯ ಮಹಾತ್ಮೆ
ಪಿ. ಬಿ. ಶ್ರೀನಿವಾಸ್
ಶ್ರೀ ರಾಘವೇಂದ್ರ ಸ್ವಾಮಿಗಳು
ರಾಜನ್-ನಾಗೇಂದ್ರ

ಇಂದು ಎನಗೆ ಗೋವಿಂದ

ನಿನ್ನಯ ಪಾದಾರವಿಂದವ

ತೋರೋ ಮುಕುಂದನೆ.. ಮುಕುಂದನೇ..

ಸುಂದರ ವದನನೆ ಆನಂದ ಇಂದಿರಾ ರಮಣಾ...|| ಪ ||

ನೊಂದೆನಯ್ಯ ಭವಬಂಧನದೊಳು ಸಿಲುಕಿ

ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು

ಕಂದನೆಂತೆನ್ನ ಕುಂದುಗಳ ಎಣಿಸದೆ

ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ|| ೧ ||

ಧಾರುಣಿಯೊಳು ಬಲುಭಾರ ಜೀವನವಾಗಿ

ದಾರಿ ತಪ್ಪಿ ನಡೆದೆ ಸೇರಿದೆ ಕುಜನರಾ

ಯಾರೂ ಕಾಯುವರಿಲ್ಲ ಸಾರಿದೆ ನಿನಗಯ್ಯ

ಧೀರ ವೇಣುಗೋಪಾಲ ಪಾರುಗಾಣಿಸೊ ಹರಿಯೆ..|| ೨ ||

ಮಂತ್ರಾಲಯ ಮಹಾತ್ಮೆ

ಚಿತ್ರ ನೋಡಿ